ಪ್ರೀತಿಯೊಂದೇ ನಾಮ ಹಲವು
ಅಮ್ಮಾ ಎಂಬ ಎರಡಕ್ಷರದಿಂದ ಪ್ರೀತಿಸುವಳು ನನ್ನ ಅಮ್ಮ
ತಾಯಿ ಎಂಬ ಎರಡಕ್ಷರದಿಂದ ಕಾಯುವಳು ಮಮತಾಮಯಿ ತಾಯಿ
ಮಾತೆ ಎಂಬ ಎರಡಕ್ಷರದಿಂದ ರಕ್ಷಿಸುವಳು ನನ್ನನ್ನು ಆ ಮಾತೆ
ಅವ್ವ ಎಂಬ ಎರಡಕ್ಷರದಿಂದ ನನ್ನ ಮನದಲ್ಲಿ ಸದಾ ನೆಲೆಸಿರುವವಳು ನನ್ನ ಹಡೆದವ್ವ
-------------------------------------------------------------------------------------------------
ನನ್ನ ಪ್ರೀತಿಯ ಅಮ್ಮ
ನಾನು ಈ ಭೂಮಿಗೆ ಬರಲು
ಸುಂದರವಾದ ಜೀವವನ್ನು ಪಡೆಯಲುಕಾರಣೀಭೂತಳು ನನ್ನ ಪ್ರೀತಿಯ ಅಮ್ಮ
ಅವಳ ಕರುಳ ಹಿಂಡಿ ಭೂಮಿಗೆ ಬಂದೆ
ಅವಳೊಡಲ ಅಮೃತವ ಹೀರಿದೆ
ಆದರೂ ಸದಾ ನಗುತಿರುವಳು ನನ್ನ ಪ್ರೀತಿಯ ಅಮ್ಮ
ನನ್ನನ್ನು ಎತ್ತಿ ಮುದ್ದಾಡಿಸಿದವಳು
ನನ್ನ ನಿರ್ಮಾಲ್ಯವನ್ನು ಶುದ್ಧ ಮಾಡಿದವಳು
ನನ್ನ ಆರೋಗ್ಯವೇ ಅವಳ ಸಂತೋಷ ಎನ್ನುವಳು ನನ್ನ ಪ್ರೀತಿಯ ಅಮ್ಮ
ನನ್ನ ಕೈ ಹಿಡಿದು ನಡೆಸುವಳು
ಬೇಡವೆಂದರೂ ಬಾಯಿಗೆ ಅನ್ನವನ್ನು ತುರುಕುವಳು
ಬೇಸರವಿಲ್ಲದೇ ನನ್ನ ಬೆಳೆಸುವಳು ನನ್ನ ಪ್ರೀತಿಯ ಅಮ್ಮ
ನನ್ನ ತಪ್ಪನ್ನು ಪ್ರೀತಿಯಿಂದ ತಿದ್ದುವಳು
ತಪ್ಪಾದರೆ ಒಮ್ಮೊಮ್ಮೆ ದಂಡಿಸುವಳು
ದಂಡನೆಯಲ್ಲೂ ಕರುಣೆ ತೋರುವಳು ನನ್ನ ಪ್ರೀತಿಯ ಅಮ್ಮ
ವಿದ್ಯೆ ಕಲಿಸುವ ಮೊದಲ ಗುರುವು ಅವಳೇ
ಬುದ್ಧಿ ತಿಳಿಸುವ ಮೊದಲ ಗೆಳತಿ ಅವಳೇ
ನನಗೆ ಜ್ಞಾನದ ಮಾರ್ಗವನ್ನು ತೋರಿಸಿದವಳು ನನ್ನ ಪ್ರೀತಿಯ ಅಮ್ಮ