Thursday, 15 January 2015





ನಾಮದಬಲ 

ಬಿಳೀಯಿರುವವನು  ಕೃಷ್ಣ 
ಕುರೂಪಿಯಾಗಿರುತ್ತಾನೆ ಹೆಸರು ಮನ್ಮಥ 
ನಾಗವೇಣಿಗಿರುವುದು ಬೆಕ್ಕಿನಬಾಲದಂತೆ ಜಡೆ 
ಕೃಷ್ಣವೇಣಿ ಎನ್ನುವಳು, ನನ್ನ ತಲೆಕೂದಲೇಕಿಷ್ಟು ಬಿಳಿ?
ಗೋಪಾಲಕೃಷ್ಣನಂತೆ, ದನದ ಚಿತ್ರವನ್ನೂ ನೋಡಿಲ್ಲ 
ರಾಮಚಂದ್ರನಿಗೋ ಹೆಂಡತಿ, ಜೋತೆಗಿಬ್ಬರು 
ಅವಳು ಆದಳು ಶಾರದೆ, ಬರೆಯಲು ಒಂದಕ್ಷರವೂ ಬಾರದೆ 
ಇವಳಾದಳು ದೇವಿ ಸರಸ್ವತಿ, ವಿದ್ಯೆ ಎಂದರೆ ಇವಳಲ್ಲಿ ನಾಸ್ತಿ. 
ಅವನ ಹೆಸರು ಶ್ರೀನಿವಾಸ, 
ಎಲ್ಲಿದೆ ಅವನಲ್ಲಿ ಶ್ರೀ ......ನಿವಾಸ 
ಹೆಸರು ಮಾತ್ರಾ ನಿರ್ಮಲ, ಮೈ ಮನವೆಲ್ಲಾ ಬರೀ ಕಷ್ಮಲ 
ವೀಣೆ ಬಾರಿಸಲು ಬಾರದವಳು ವಾಣಿ 
ವಿನೋದನಾದರೇನು ಸದಾ ಗಂಭೀರ 
ವಿಜಯನಾದರೇನು ಸದಾ ಸೋಲಿನ ಸರದಾರ  
ಪದ್ಮನಾಭನಂತೆ, ಸಿಗರೆಟ್ಟು ಜೇಬಿನಲ್ಲಿ 
ಕಮಲನಾಭನಂತೆ, ಕದ್ದು ಕುಡಿಯುವನು ಬಾರಿನಲ್ಲಿ
ಮುಖತುಂಬಾ ಕಲೆ, ಹೆಸರು ಶಶಿಕಲಾ 
ರವಿಯ ತೇಜಸ್ಸು ಅರಿಯದವಳು ರವಿಕಲಾ 
ಹೆಸರು ಮಾತ್ರಾ ಸುಂದರ ಮುಟ್ಟಿದರೆ,
ಕೈತೊಳೆಯಲು ಅವಸರ ........... 








No comments:

Post a Comment