Tuesday, 10 February 2015




ಪ್ರಕೃತಿ  

        






ಪ್ರಕೃತಿ ನೋಡಲು ಅದೆಷ್ಟು ಸುಂದರ
ಗಿಡಮರ ನೆಲಜಲಗಳಿಂದ ತುಂಬಿ ಮನೋಹರ 

ನೀಲವರ್ಣದ ಆಗಸದಲ್ಲಿ
ಮೂಡಿದೆ ಮೋಡಗಳ ರಂಗವಲ್ಲಿ

ಬೆಳಗಾಗಲು ಕಾರಣ ಉದಯಭಾಸ್ಕರ
ಲೋಕವನು ಬೆಳಗುವ ನಿನಗೆ ನನ್ನ ನಮಸ್ಕಾರ 











ಹುಣ್ಣಿಮೆ ಬಂತೆಂದರೆ ನಗುವ ಚಂದಿರ 
ಮಕ್ಕಳ ಪಾಲಿಗೆ ನೋಡಲು ಬಲು ಸುಂದರ 

ಬಾನಲ್ಲಿ ನೋಡಿ ಚುಕ್ಕಿಗಳ ಸಾಲು ಸಾಲು
ನೆಲದಲ್ಲಿ ನಿಲ್ಲಲಾರವು ನನ್ನ ಕಾಲು 

ಮಳೆ ಬಂತೆಂದರೆ ಬಾಗುವ ಮರ 
ಮಳೆ ಬಿಟ್ಟೊಡನೆ ತೊಟ್ಟಿಕ್ಕುವ ಜಲ 




ಸಮುದ್ರದ ಮಹಾ ಅಬ್ಬರ ಮಳೆಗಾಲದಲ್ಲಿ 
ಸ್ತಬ್ದವಾಗಿಯೇ ನೆಲೆಯೂರುತಿದೆ ಬೇಸಿಗೆಯಲ್ಲಿ 

ಮೋಡ ಬಂತೆಂದರೆ ಸುರಿಯುವ ಮಳೆ
ನಿಂತ ಮೇಲೆ  ಇಳೆಗೆ ಎಷ್ಟೊಂದು ಕಳೆ


ರಸ್ತೆಯಲ್ಲಿ ಬಂದರೆ ವಾಹನಗಳ ಸಾಲು ಸಾಲು
ನೋಡಿ ಆದಳು ಪ್ರಕೃತಿ ಮಾತೆ ಆದಳು ಕಂಗಾಲು 























No comments:

Post a Comment